ಆನಂದ ಗೋಪಾಲ್ ಮುಖೋಪಾಧ್ಯಾಯ (27 ನವೆಂಬರ್ 1926-1989) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಕ್ರಿಯ ಸದಸ್ಯರಾಗಿದ್ದರು. == ಆರಂಭಿಕ ಜೀವನ == ಆನಂದ ಗೋಪಾಲರು ಬಸಂತ ಕುಮಾರ್ ಮುಖೋಪಾಧ್ಯಾಯ ಅವರ ಮಗನಾಗಿ,1926ರ ನವೆಂಬರ್ 27ರಂದು ಭೀರಿಂಗಿಯಲ್ಲಿ (ಈಗ ದುರ್ಗಾಪುರದಲ್ಲಿದೆ) ಜನಿಸಿದರು. ಅವರು ವಿಜ್ಞಾನದಲ್ಲಿ ಪದವಿಯನ್ನು ಪಡೆದಿದ್ದರು. . == ರಾಜಕೀಯ ವೃತ್ತಿಜೀವನ == 1951ರಲ್ಲಿ ಮುಖರ್ಜಿಯವರು ಔಸ್ಗ್ರಾಮ್ ವಿಧಾನ ಸಭಾ ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾದರು. 1957ರಲ್ಲಿ ಅವರು ಒಂಡಲ್ ಕ್ಷೇತ್ರದಿಂದ ಆಯ್ಕೆಯಾದರು. 1962 ಮತ್ತು 1972ರಲ್ಲಿ ಅವರು ಆಗ ಹೊಸದಾಗಿ ರೂಪುಗೊಂಡ ದುರ್ಗಾಪುರ ಕ್ಷೇತ್ರದಿಂದ ಆಯ್ಕೆಯಾದರು. ಆನಂದ ಗೋಪಾಲ್ ಮುಖೋಪಾಧ್ಯಾಯ ಅವರು 1980 ಮತ್ತು 1984 ರಲ್ಲಿ ಅಸನ್ಸೋಲ್ (ಲೋಕಸಭಾ ಕ್ಷೇತ್ರ) ದಿಂದ ಭಾರತೀಯ ಸಂಸತ್ತಿಗೆ ಆಯ್ಕೆಯಾದರು. ಅವರು ಅಧ್ಯಕ್ಷರಾಗಿ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ, ಐಎನ್ ಟಿಯುಸಿ ಕೇಂದ್ರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ, ಭಾರತೀಯ ರಾಷ್ಟ್ರೀಯ ಲೋಹ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ, ಅಖಿಲ ಭಾರತ ರಾಷ್ಟ್ರೀಯ ಸಾಮಾನ್ಯ ವಿಮಾ ನೌಕರರ ಸಂಘ (ಐಎನ್ಟ್ಯುಸಿ) ದುರ್ಗಾಪುರ ಪ್ರಾಜೆಕ್ಟ್ಸ್ ಲಿಮಿಟೆಡ್ ಮತ್ತು ದುರ್ಗಾಪುರ ಕೆಮಿಕಲ್ಸ್ ಲಿಮಿಟೆಡ್ ನ ನಿರ್ದೇಶಕರಾಗಿ, 1972-76ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ. == ಉಲ್ಲೇಖಗಳು == ಇತಿಹಾಸಕಾರ ಸಂದೀಪ್ ಬಂಡೋಪಾಧ್ಯಾಯ ಅವರ ಕೃತಿಟೆಂಪ್ಲೇಟು: , Bengalಟೆಂಪ್ಲೇಟು: Assembly3